ಈ ಲೇಖನದ ಮೂಲಕ ಅನ್ನ ಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ಜಮಾ ಆಗಿದಿಯೇ ಎನ್ನುವುದನ್ನು ಹೇಗೆ ಚೆಕ್ ಮಾಡುವುದು ಎನ್ನುವ ಕುರಿತು ಸಂಪೂರ್ಣವಾದ ಮಾಹಿತಿ ಇಲ್ಲಿ ತಿಳಿಸಲಾಗಿದೆ. ಎಲ್ಲರಿಗು ತಿಳಿದಿರುವಹಾಗೆ ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಅನ್ನ ಭಾಗ್ಯ ಅಡಿಯಲ್ಲಿ ಅಕ್ಕಿ ಬದಲು ಬಿ ಪಿ ಎಲ್ ಕಾರ್ಡ್ ಹೊಂದಿದವರಿಗೆ ಪ್ರತಿ ಸದಸ್ಯರಿಗೆ ಪ್ರತಿ ತಿಂಗಳು 170 ರೂಗಳನ್ನೂ ಅವರ ಖಾತೆಗೆ ಜಮಾ ಮಾಡುವದಾಗಿ ತಿಳಿಸಿದ್ದಾರೆ. ಅದೇರೀತಿ ಸೋಮವಾರದಿಂದ ಹಣವನ್ನು ಖಾತೆಗೆ ಜಮಾ ಮಾಡಲಾಗಿದೆ. ಆ ಹಣ ನಿಮಗೂ ಬಂದಿದೆಯಾ ಅಥವಾ ಇಲ್ವಾ ಅನ್ನುವದನ್ನು ಈ ಸುಲಭ ವಿಧಾನದ ಮೂಲಕ ಚೆಕ್ ಮಾಡಿ ಹಾಗು ಈ ಲೇಖನವನ್ನು ಪೂರ್ತಿ ಓದಿ.
ಅನ್ನ ಭಾಗ್ಯ ಯೋಜನೆಯ ಹಣ ಬಂದಿರುವುದನ್ನು ಈಗಲೇ ಚೆಕ್ ಮಾಡಿ :
ಅಕ್ಕಿಯ ಕೊರೆತೆಯಿಂದ ಅನ್ನ ಭಾಗ್ಯ ಯೋಜನೆಯ ಅಕ್ಕಿಯ ಬದಲು ಹಣ ನೀಡಲು ಸರ್ಕಾರ ನಿರ್ಧಾರ ಮಾಡಿದೆ. ಸೋಮವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಕ್ರಮಕ್ಕೆ ಚಾಲನೆ ಮಾಡಿದರು. ಕರ್ನಾಟಕದ ಎಲ್ಲ ಜಿಲ್ಲೆಗಳಿಗೆ ಹಂತ ಹಂತವಾಗಿ ಹಣವನ್ನು ವರ್ಗಾವಣೆ ಆಗುತ್ತದೆ. ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗಿದೆಯೇ ? ಎಂದು ತಿಳಿಯಲು ಸರ್ಕಾರ ಒಂದು ಅದಿಕ್ರುತ ಜಾಲತಾಣವನ್ನು ಬಿಡಿಗಡೆ ಮಾಡಿದೆ.
ಅನ್ನ ಭಾಗ್ಯ ಯೋಜನೆಯ ಹಣ ಜಮಾ ಆಗಿದೆಯಾ ಎಂದು ನೋಡುವ ವಿಧಾನ :
ಹಂತ 1 : ಮೊದಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಾಲತಾಣಕ್ಕೆ ಭೇಟಿ ನೀಡಲು ಕ್ಲಿಕ್ ಹಿಯರ್
https://ahara.kar.nic.in/Home/Eservices
ಹಂತ 2 : ನಂತರ ನಿಮ್ಮ ಜಿಲ್ಲೆಯ ಮೇಲೆ ಕಾಣುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಹಂತ 3 : ನಂತರ ಕೆಳಗೆ ಇರುವ ಡಿಬಿಟಿ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.
ಹಂತ 4 : ಮುಂದೆ ನಿಮ್ಮ ರೇಷನ್ ಕಾರ್ಡ್ ನಂಬರ್ ಟೈಪ್ ಮಾಡಿ. ನಂತರ ಗೋ ಎಂದು ಕ್ಲಿಕ್ ಮಾಡಿ್ದಾರೆ, ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರುವವರ ಸದಸ್ಯರ ಸಂಖ್ಯೆ , ಮುಖ್ಯಸ್ಥರ ಹೆಸರು, ಸದಸ್ಯರ ಯುಐಡಿ, ಎಷ್ಟು ಹಣ ಜಮಾ ಆಗುತ್ತದೆ ಅಥವಾ ಆಗಿದೆ ಅಂದು ನಿಮಗೆ ಸಂಪೂರ್ಣವಾದ ಮಾಹಿತಿ ದೊರೆಯುತ್ತದೆ.
ಈ ರೀತಿ ನೀವು ಅನ್ನ ಭಾಗ್ಯ ಯೋಜನೆಯ ಹಣ ಜಮಾ ಆಗಿದೆಯಾ ಅಥವಾ ಇಲ್ವಾ ಎಂಬುವದನ್ನು ಚೆಕ್ ಮಾಡಬಹುದು.