ಇತ್ತೀಚಿಗೆ ದಿನಗಳಲ್ಲಿ ನೋಡ್ತಾ ಇದ್ರೆ ಎಲ್ಲರೂ ಮುಖಗಳನ್ನು ನೋಡಿ ಗೌರವ ಕೊಡುತ್ತಾರೆ, ಬಟ್ಟೆ ನೋಡಿ ಗೌರವ ಕೊಡ್ತಾರೆ, ಆಸ್ತಿ ಅಂತಸ್ತು ನೋಡಿ ಗೌರವ ಕೊಡ್ತಾರೆ, ಹೊರತು ಒಳ್ಳೆ ಗುಣ ಒಳ್ಳೆ ಮನಸು ಇರೋರಿಗೆ ಬೆಲೆನೇ ಇಲ್ಲ.
ಆದರೆ ಒಳ್ಳೆಯ ಗುಣ ಒಳ್ಳೆಯ ನಡತೆ ಒಳ್ಳೆಯ ಸಂಸ್ಕೃತಿ ಈಗಿನ ಕಾಲದಲ್ಲಿ ನೋಡಲ್ಲ.
ಉದಾಹರಣೆಗೆ : ಯಾವಾಡೊ ಒಂದು ಹುಡುಗಿ ಅಂದವಾಗಿ ಇದ್ದಾಳೆ ಅಂದ್ರೆ ಸಾಕು ಹುಡುಗಿ ಒಳ್ಳೆಯವಳು ಅಂತ ಅಂದುಕೊಳ್ಳುತ್ತಾರೆ. ಅಂದವಾಗಿ ಇದ್ದಾರೆ ಅಂದ ಮಾತ್ರಕ್ಕೆ ಅವರು ಒಳ್ಳೆಯವರಲ್ಲ ಆದರೆ ಎಲ್ಲರು ಒಂದೇ ರೀತಿನೂ ಇರಲ್ಲ ಕೆಲವಬ್ಬರು ಒಳ್ಳೆಯರು ಇರುತ್ತಾರೆ. ಅಂದ ಇಲ್ಲ ಅಂದ್ರೆ ಅವರು ಕೆಟ್ಟವರು ಅಂತ ಅಲ್ಲ ಅವರಲ್ಲೂ ಒಳ್ಳೆತನ ಇರುತ್ತೆ ಅದನ್ನ ತಿಳ್ಕೊಬೇಕು ಅಷ್ಟೇ.
ಇತ್ತೀಚಿಗೆ ಜನ ಯಾವ ರೀತಿ ಇದ್ದಾರೆ ಅಂದರೆ ಒಂದು ಹುಡುಗ ಒಂದು ಹುಡುಗಿಯನ್ನು ನೋಡಬೇಕಾದರೆ ಮುಖ ನೋಡಿ ಚೆನ್ನಾಗಿದ್ದೀರೇ ಆಯ್ತು ಓಕೆ ಅಂತ ಹೇಳ್ತಾರೆ, ಅವರ ಬಗ್ಗೆ ಸ್ವಲ್ಪ ಕೂಡ ಯೋಚನೆ ಮಾಡೋದೇ ಇಲ್ಲ. ಅದೇ ನೋಡೋಕೆ ಚನಾಗಿ ಇಲ್ಲ ಅಂದ್ರೆ ಅವರ ಬಗ್ಗೆ ಎಷ್ಟು ಪ್ರಶ್ನೆ ಮಾಡ್ತಾರೆ ಅಂದ್ರೆ ಕೇಳೋದಕ್ಕೂ ಆಗಲ್ಲ. ಇದು ನಮ್ಮ ಇವತ್ತಿನ ಜಗತ್ತು ಸ್ನೇಹಿತರೆ.
ನಂತರ ಮದುವೆ ಯಾಗುತ್ತೆ ಸಮಯ ಹೋದಹಾಗೆ ಅವರಿಗೆ ಮುಖ ಮೇಲೆ ಇರೋ ಆಸಕ್ತಿ ಕಡಿಮೆ ಆಗುತ್ತಾ ಹೋಗುತ್ತೆ ಅವಾಗ ಅನಸುತ್ತೆ ಒಳ್ಳೆ ಗುಣ ಒಳ್ಳೆ ಸಂಸ್ಕೃತಿ ಅಂದ ಚಂದದ ಮಾತುಗಳು ಇರಬೇಕಾಗಿತ್ತು ಅಂತ ಅನಸುತ್ತೆ, ಆದರೆ ಅವರ ಬಳಿ ಇರುವುದಿಲ್ಲ ಮೂಖ ನೋಡಕೆ ಚಂದ ಇರುತ್ತೆ ಆದರೆ ಒಳ್ಳೆ ಗುಣ ಇರುವುದಿಲ್ಲ.
ದಯವಿಟ್ಟು ಮದುವೆ ಮಾಡಿಕೊಳ್ಳುವರು ಮೂಖ ನೋಡಿ ಮದುವೆ ಆಗದೇ ಮತ್ತೆ ಆಸ್ತಿ ಅಂತಸ್ತು ನೋಡಿ ಮದುವೆ ಆಗದೆ ಅವರ ಸ್ವಭಾವ ಅವರ ಗುಣಗಳೂ ನೋಡಿ ಮಾಡುವೆ ಆಗಿ ಜೀವನ ಅದ್ಭುತವಾಗಿರುತ್ತದೆ. ಅದೂ ಹುಡುಗ ಇರಬಹುದು ಹುಡುಗಿಯಾಗಿರಬಹುದು ನೋಡಿ ಮದುವೆ ಮಾಡಿಕೊಳ್ಳಿ.
ಮಡುವೆ ಅನ್ನೋದು ತುಂಬಾ ಪವಿತ್ರವಾದ ಸಂಬಂಧ, ನೀವು ಸಾಯುವವರಿಗೆ ಸಂಸಾರ ಮಾಡಬೇಕಾಗುತ್ತದೆ ಮದುವೆ ಮಾಡಿಕೊಂಡು ಆಮೇಲೆ ನಿಮ್ಮ ಜೀವನ ಹಾಳು ಮಾಡಿಕೊಳ್ಳಬೇಡಿ. ಒಳ್ಳೆ ಗುಣ ಒಳ್ಳೆ ಮನಸು ಒಳ್ಳೆ ಜೀವನವನ್ನ ಕೊಡುತ್ತೆ. ಇಷ್ಟ ಆಗಿದ್ರೆ ನೀವು ಇಷ್ಟಾ ಪಡೋರಿಗೆ ಶೇರ್ ಮಾಡಿ.