ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಖಾಲಿ ಇರುವ ಸಿವಿಲ್ ಜಡ್ಜ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ 2023 ||

Spread the love

ಕರ್ನಾಟಕ ಉಚ್ಚ ನ್ಯಾಯಾಲಯಲಯದಲ್ಲಿ(Karnataka High Court) ಖಾಲಿ ಇರುವ ಹಾಗೂ ಬ್ಯಾಕ್ ಲಾಗ್ ಹುದ್ದೆಗಳು ಸೇರಿದಂತೆ ಸಿವಿಲ್ ನ್ಯಾಯಾಧೀಶರ (ಜಡ್ಜ್) ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 13 ಏಪ್ರಿಲ್ 2023 ರೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ವಿದ್ಯಾರ್ಹತೆ :

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಕಾನೂನಿನಲ್ಲಿ ಪದವಿಯನ್ನು(LLB) ಪೂರ್ಣಗೊಳಿಸಿರಬೇಕು.

ಆಯ್ಕೆಯ ವಿಧಾನ :

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳನ್ನು ಪೂರ್ವಭಾವಿ ಪರೀಕ್ಷೆ, ಮುಖ್ಯ ಲಿಖಿತ ಪರೀಕ್ಷೆ, ಮೌಖಿಕ ಪರೀಕ್ಷೆ , ಕಂಪ್ಯೂಟರ್ ಪರೀಕ್ಷೆಯ ಮೂಲಕ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ :

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಹುದ್ದೆಗಳ ನೇಮತಿಯ ಅನುಸಾರದಂತೆ ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷೆಗಳಿಗೆ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

  • ಪೂರ್ವಭಾವಿ ಪರೀಕ್ಷಾ ಶುಲ್ಕ : SC/ST/Cat-I ಅಭ್ಯರ್ಥಿಗಳು: ರೂ.500/-
    ಸಾಮಾನ್ಯ/ಕ್ಯಾಟ್-2A/2B/3A/3B ಅಭ್ಯರ್ಥಿಗಳು: ರೂ.1000/- ಆನ್‌ಲೈನ್ ಅಥವಾ ಚಲನ್ ಮೂಲಕ ಪಾವತಿಸುವದಾಗಿದೆ.
  • ಮುಖ್ಯ ಲಿಖಿತ ಪರೀಕ್ಷಾ ಶುಲ್ಕ : SC/ST/Cat-I ಅಭ್ಯರ್ಥಿಗಳು: ರೂ.750/-
    ಸಾಮಾನ್ಯ/ಕ್ಯಾಟ್-2A/2B/3A/3B ಅಭ್ಯರ್ಥಿಗಳು: ರೂ.1500/- ಆನ್‌ಲೈನ್ ಅಥವಾ ಚಲನ್ ಮೂಲಕ ಪಾವತಿಸುವದಾಗಿದೆ
    .

ವಯೋಮಿತಿ :

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಅಭ್ಯರ್ಥಿಯ 10-Apr-2023 ಕ್ಕೆ ಅನುಗುಣವಾಗುವಂತೆ ಗರಿಷ್ಠ 35 ವಯೋಮಿತಿಯನ್ನು ಹೊಂದಿರಬೇಕಾಗುತ್ತದೆ.
SC/ST ಅಭ್ಯರ್ಥಿಗಳಿಗೆ : 03 ವರ್ಷ
ಸೇವೆಯಲ್ಲಿರುವ ಅಭ್ಯರ್ಥಿಗಳಿಗೆ: 05 ವರ್ಷ
ಇನ್-ಸರ್ವಿಸ್ (SC/ST) ಅಭ್ಯರ್ಥಿಗಳಿಗೆ: 08 ವರ್ಷಗಳ ಕಾಲ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ.

ವೇತನ ಶ್ರೇಣಿ :

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ 27,700/- ರೂ ಗಳಿಂದ 44,770/- ರೂ ಗಳ ವರೆಗೆ ನಿಗದಿಪಡಿಸಲಾಗಿದೆ.

ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 11 ಮಾರ್ಚ್ 2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 13 ಎಪ್ರಿಲ್ 2023
ಉದ್ಯೋಗ ಸ್ಥಳ : ಕರ್ನಾಟಕ

Apply online : Click here

Leave a Reply

Your email address will not be published. Required fields are marked *