ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ 2023

Spread the love

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಖಾಲಿ ಇರುವ 163 ಅಸಿಸ್ಟೆಂಟ್, ಜೂನಿಯರ್ ಟೆಕ್ನಿಷಿಯನ್, ಅಪ್ಪರ್ ಮೆಡೀಷನ್ ಕ್ಲರ್ಕ್, ಫೀಲ್ಡ್ ಅಟೆಂಡೆಂಟ್ ಮತ್ತು ಮಲ್ಟಿ ಟಾಸ್ಕಿOಗ್ ಸೆರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನ ಸಲ್ಲಿಸಬಹುದು.

ವಿದ್ಯಾರ್ಹತೆ :-

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ SSLC, PUC, Diloma, ಪದವಿ, ಸ್ನಾತಕೋತ್ತರ ಪದವಿವಿದ್ಯಾರ್ಹತೆಯನ್ನು ಮಾನ್ಯತೆಪಡೆದ ಸಂಸ್ಥೆ ಅಥವಾ ವಿದ್ಯಾಲಯದಿಂದ ಪಡೆದಿರಬೇಕು

ವಯೋಮಿತಿ :-

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷಗಳು ಮತ್ತು ಹುದ್ದೆಗಳಿಗನುಗುಣವಾಗಿ ಗರಿಷ್ಠ 35 ವರ್ಷಗಳ ಗರಿಷ್ಠ ಮಿತಿ ನಿಗದಿಪಡಿಸಲಾಗಿದೆ.ಮೀಸಲಾತಿ ಅಭ್ಯಥಿಗಳಿಗೆ 05 ರಿಂದ 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

ಅರ್ಜಿ ಶುಲ್ಕ :-

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಶುಲ್ಕವನ್ನು ಪರೀಕ್ಷಾ ಅವಧಿಯ ಆಧಾರದ ಮೇಲೆ ನಿಗದಿಪಡಿಸಲಾಗಿದೆ, ಪ್ರತಿ 2 ಘಂಟೆಯ ಅವಧಿಗೆ 1000 ರೂ,ಮತ್ತು 1 ಘಂಟೆಯ ಅವಧಿಗೆ 500 ರೂ ಅರ್ಜಿ ಶಲ್ಕವನು ನಿಗದಿಪಡಿಸಲಾಗಿದೆ.

ಮೀಸಲಾತಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಪ್ರತಿ 2 ಘಂಟೆಯ ಅವಧಿಗೆ 250 ರೂ,ಮತ್ತು 1 ಘಂಟೆಯ ಅವಧಿಗೆ 150 ರೂ ಅರ್ಜಿ ಶಲ್ಕವನು ನಿಗದಿಪಡಿಸಲಾಗಿದೆ.

ಆಯ್ಕೆಯಾ ವಿಧಾನ :-

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನ ನಡೆಸುವ ಮೂಲಕ ಆಯ್ಕೆಮಾಡಲಾಗುತ್ತದೆ.

ವೇತನ ಶ್ರೇಣಿ :-

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗನುಗುಣವಾಗಿ ವಿವಿಧ ಶ್ರೇಣಿಯ ವೇತನವನ್ನು ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 6 ಮಾರ್ಚ್ 2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31 ಮಾರ್ಚ್ 2023
ಉದ್ಯೋಗ ಸ್ಥಳ : ಭಾರತದಾದ್ಯಂತ

Leave a Reply

Your email address will not be published. Required fields are marked *