ಜನರು ಹಿಂದಿನ ಕಾಲದಲ್ಲಿ ಹೇಗೆ ಇದ್ದರೂ ಅಂದ್ರೆ, ಹಳ್ಳಿಜನರು ಮುಂಜಾನೆಯಿಂದ ರಾತ್ರಿಯ ವರೆಗೂ ಹೊಲದಲ್ಲಿ ಕೆಲಸಾ ಮುಗಿಸಿ ಮನೆಗೆ ಬರುವಾಗ ಎತ್ತಿನ ಗಾಡಿಯ ಮೇಲೆ ಜನ ಮನೆಗೆ ಬರುತ್ತಿದ್ದರು, ಒಂದು ದಿನಾ ಸಂಜೆ ಕೆಲಸ ಬಿಟ್ಟು ಬರುವುದು ಸ್ವಲ್ಪ ಲೇಟ್ ಆಯಿತು, ಬರುವಾಗ ರಾತ್ರಿ ಸಮಯದಲ್ಲಿ ಬೆಕ್ಕುಅಡ್ಡ ಬಂತೂ ಆವಾಗ ಎತ್ತುಗಳು ಬೆಕ್ಕಿನ ಕಣ್ಣನ್ನು ನೋಡಿ ಭಯಬಿದ್ದು ಎತ್ತಿನಬಂಡಿ ಆಕಡೆ ಈಕಡೆ ಹೋದಾಗ ಜನರಿಗೆ ತುಂಬಾ ಭಯವಾಯಿತು, ಹಾಗೇ ಮನೆಗೆ ಬಂದ್ರು ಮತ್ತೆ ಒಂದು ವಾರದ ನಂತರ ಮತ್ತೆ ಬೆಕ್ಕುಅಡ್ಡ ಬಂದಾಗ ಎತ್ತಿನಬಂಡಿ ಜನರನ್ನು ಕೆಳಗಡೆ ಬೀಳಿಸಿತು ಕೆಲವರಿಗೆ ಗಾಯ ಆಯಿತು, ಹೀಗೆ ಒಂದು ಬೆಕ್ಕಿನಿಂದಾಗಿ ಕೆಲವರು ತೀರಿಕೊಂಡರು.
ಆವಾಗ ಜನರು ಮಾತನಾಡಿಕೊಂಡರು ಬೆಕ್ಕು ಅಡ್ಡ ಬಂದ್ರೆ ಎತ್ತಿನ ಗಾಡಿಯನ್ನ 10ನಿಮಿಷ ನಿಲ್ಲಾಸಬೇಕು ಅಂತ, ಯಾಕಂದ್ರೆ ಬೆಕ್ಕಿನ ಕಣ್ಣು ದೆವ್ವಿನಾಥರ ಇರುತ್ತವೇ ರಾತ್ರಿ ನೋಡುವಾಗ ಎತ್ತುಗಳಿಗೆ ಏನೋ ಬಂತು ಅಂತ ಭಯ ಬೀಳುತ್ತೆ, ಅದಕ್ಕೇ ಬೆಕ್ಕು ಹೋದಮೇಲೆ 10ನಿಮಿಷನಿಲ್ಲಿಸಿ ರಾತ್ರಿ ಸಮಯದಲ್ಲಿ ನಿಲ್ಲಿಸುತ್ತಿದ್ದರು. ಆದರೆ ಇತ್ತಿಚಿನ ದಿನಗಳಲ್ಲಿ ಜನರು ಹಗಲಿನಲ್ಲೂ ಬೆಕ್ಕು ಅಡ್ಡ ಬಂದ್ರೆ ಸಾಕು ರೋಡಲ್ಲಿ 10ನಿಮಿಷ ನಿಂತು ಹೋಗುತ್ತಾರೆ. ನನ್ನ ಪ್ರಕಾರ ಬೆಕ್ಕು ಅಡ್ಡ ಬಂದ್ರೆ ಅದು ಕೆಟ್ಟದ್ದಲ್ಲ, ಬೆಕ್ಕನ್ನ ನೋಡಿದರೆ ಕೆಟ್ಟದ್ದು ಅಂತಾರೆ ಆದರೆ ಮನೆಯಲ್ಲಿ ಬೇಕ್ಕನ್ನೆ ಸಾಕ್ತಿವಿಯೇ ಹೊರತು, ನರಿಯನ್ನಲ್ಲ ನರಿನೋಡಿದರೆ ಒಳ್ಳೇದಾಗುತ್ತೆ ಅಂತಾರೆ ಇದು ಯಾವ ನ್ಯಾಯಾ ಹೇಳಿ ಸ್ನೇಹಿತರೆ.