HDFC Scholarship 2023 :
ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ಜೊತೆಗೆ ಆರ್ಥಿಕ ಸಮಸ್ಯೆಯಿಂದ ದೂರ ಮಾಡುವ ಸಲುವಾಗಿ ಪ್ರತಿವರ್ಷ ಎಚ್ ಡಿ ಎಫ್ ಸಿ ಬ್ಯಾಂಕ್ ವತಿಯಿಂದ ಪರಿವರ್ತನಾ ECS ವಿದ್ಯಾರ್ಥಿ ವೇತನ ನೀಡಲಾಗುತ್ತದೆ.
ವಿದ್ಯಾರ್ಥಿಗಳು 75 000 ರೂ, ವಿದ್ಯಾರ್ಥಿವೇತನವನ್ನ ಪಡೆಯುತ್ತಾರೆ. ಅದೇ ರೀತಿ ಈ ಸಲವೂ ಕೂಡ ಇದೀಗ ಪರಿವರ್ತನಾ ECS ವಿದ್ಯಾರ್ಥಿವೇತನಕ್ಕೆ 2022 – 23 ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನ ಸಲ್ಲಿಸಬಹುದು.
ಯಾರೆಲ್ಲ ಅರ್ಜಿಯನ್ನ ಸಲ್ಲಿಸಬಹುದು ?
- ಸಮಾಜದ ಹಿಂದುಳಿದ ವರ್ಗಗಳಿಗೆ ಸೇರಿದ ಪ್ರತಿಭಾವಂತ ಮತ್ತು ಅಗತ್ಯವಿರುವ ಈ ಸೌಲಭ್ಯವನ್ನ ಪಡೆಯಬಹುದಾಗಿದೆ.
- 1 ನೇ ತರಗತಿಯಿಂದ ಯುಜಿ ಮತ್ತು ಪಿಜಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿಯನ್ನ ಸಲ್ಲಿಸಬಹುದು.
- ಅಭ್ಯರ್ಥಿಗಳು ಕನಿಷ್ಠ 55% ಅಂಕಗಳೊಂದಿಗೆ ಹಿಂದಿನ ತರಗತಿ ಪಾಸ್ ಆಗಿರಬೇಕು
- 2.5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರಬೇಕು.
ಅರ್ಜಿ ಸಲ್ಲಿಸುವ ದಿನಾಂಕಗಳು :-
ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು 15 ಮಾರ್ಚ್ 2023 ಕೊನೆಯ ದಿನಾಂಕವಾಗಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನ ಸಲ್ಲಿಸಬಹುದು. ಈ ಬಗ್ಗೆ ಸಂಪೂರ್ಣವಾದ ವಿವರ ಇಲ್ಲಿದೆ.
ಅರ್ಜಿ ಸಲ್ಲಿಸುವ ಬಗೆ :-
- ಮೊದಲು ಎಚ್ ಡಿ ಎಫ್ ಸಿ ಬ್ಯಾಂಕ್ ನ ಅಧಿಕೃತ ಸ್ಕಾಲರ್ಶಿಪ್ ಸೈಟ್ https://www.buddy4study.com/page/hdfc-bank-parivartans-ecs-scholarship ಗೆ ಭೇಟಿ ನೀಡಿ.
- ನಂತರ ಅಲ್ಲಿ ಕಾಣಿಸುವ apply now ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಆಗ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಮೂರು ವಿಭಾಗಗಳು ಕಾಣಿಸುತ್ತವೆ.
- ನಂತರ ನೀವು ನೋಂದಾಯಿತ ಐಡಿ ಬಳಸಿ, ಕೇಳಿದ ಮಾಹಿತಿಗಳನ್ನು ನೀಡಿ, ಅರ್ಜಿಯನ್ನ ಸಲ್ಲಿಸಿ.
- ನೀವು ಇಲ್ಲಿವರೆಗೆ ನೋಂದಣಿ ಮಾಡದೇ ಇದ್ದರೆ, ನೋಂದಣಿ ಮಾಡಬಹುದು. ಅದಕ್ಕೆ ಅಲ್ಲಿ ನಿಮ್ಮ ಹೆಸರು, ಮೊಬೈಲ್ ನಂಬರ್ ಹಾಗೂ ಇ-ಮೇಲ್ ಐಡಿ ನೀಡಬೇಕು, ಹಾಗೂ ಪಾಸ್ ವರ್ಡ್ ಹಾಕಿರಿ.
- ನಂತರ ನಿಮ್ಮನ್ನ ECS ವಿದ್ಯಾರ್ಥಿವೇತನದ ಅರ್ಜಿ ನಮೂನೆಯ ಪೇಜ್ ಗೆ ಮರು ನಿರ್ದೇಶಿಸಲಾಗುತ್ತದೆ.
- ನಂತರ apply now ಮೇಲೆ ಕ್ಲಿಕ್ ಮಾಡಿ.
- ಅಲ್ಲಿ ನಿಮ್ಮ ಹೆಸರು, ಶಾಲಾ ವಿವರ ಒಳಗೊಂಡಂತೆ ಅಗತ್ಯ ಮಾಹಿತಿಯನ್ನ ಭರ್ತಿ ಮಾಡಿ.
- ನಂತರ ನಿಮ್ಮ ಶೈಕ್ಷಣಿಕ ಅರ್ಹತೆಯ ದಾಖಲೆಗಳನ್ನ ಅಪ್ಲೋಡ್ ಮಾಡಿ.
- ಭರ್ತಿ ಮಾಡಿರುವ ಮಾಹಿತಿಯನ್ನು ನೋಡಲು preview ಮೇಲೆ ಕ್ಲಿಕ್ ಮಾಡಿ, ತಿದ್ದುಪಡಿ ಇದ್ದಲ್ಲಿ ಮಾಡಬಹುದು.
- ನೀವು ನೀಡಿರುವ ಮಾಹಿತಿ ಸರಿಯಾಗಿದ್ದರೆ ಮತ್ತು ಅರ್ಜಿ ಸಲ್ಲಿಕೆ ಸರಿಯಾಗಿದ್ದರೆ ಹಣ ನೇರವಾಗಿ ನಿಮ್ಮ ಬ್ಯಾಂಕ್ ಗೆ ವರ್ಗಾವಣೆ ಮಾಡಲಾಗುತ್ತದೆ.
Apply online : click here