ಕರ್ನಾಟಕ ಅರಣ್ಯ ಇಲಾಖೆಯು ಕೆಎಫ್ಡಿ ಯಲ್ಲಿ ಖಾಲಿ ಇರುವ ಆನೆ ಕಾವಾಡಿಗ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 29 ಏಪ್ರಿಲ್ 2023 ರೊಳಗಾಗಿ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ : 19
ಕೊಡಗು – 4
ಚಾಮರಾಜನಗರ – 6
ಮೈಸೂರು – 5
ಶಿವಮೊಗ್ಗ – 4
Qualification :
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಕನ್ನಡ ಮಾತನಾಡುವ ಹಾಗೂ ಅರ್ಥೈಸಿಕೊಳ್ಳುವ ಸಾಮರ್ಥ್ಯ ಮತ್ತು ಆನೆ ನಿರ್ವಹಣೆಯಲ್ಲಿ ಅನುಭವ ಹೊಂದಿರುವದು ಕಡ್ಡಾಯವಾಗಿರುತ್ತದೆ.
Selection Procedure :
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳನ್ನು ಕರ್ನಾಟಕ ಅರಣ್ಯ ಇಲಾಖೆಯ ನಿಯಮಾನುಸಾರದಂತೆ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.
Age Limit :
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷ ವಯೋಮಿತಿಯಿಯನ್ನು ಹೊಂದಿರಬೇಕು.
2A, 2B, 3A, 3B, OBC ಅಭ್ಯರ್ಥಿಗಳು: 03 ವರ್ಷಗಳು
SC, ST ಅಭ್ಯರ್ಥಿಗಳು : 5 ವರ್ಷಗಳ ಕಾಲ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ.
Pay Scale :
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 18,600/- ರೂ ಗಳಿಂದ 32,600/- ರೂ ಗಳ ವರೆಗೆ ಮಾಸಿಕ ವೇತನ ನೀಡಲಾಗುತ್ತದೆ.
ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಳಾಸ :
ಕೊಡಗು ಜಿಲ್ಲೆಯ ಅರ್ಜಿ ಸಲ್ಲಿಕೆ ವಿಳಾಸ :
“ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ”, ಕೊಡಗು ವೃತ್ತ, ಅರಣ್ಯ ಭವನ, ಮೈಸೂರು ರಸ್ತೆ, ಮಡಿಕೇರಿ – 571201, ಕೊಡಗು
ಮೈಸೂರು ಜಿಲ್ಲೆಯ ಅರ್ಜಿ ಸಲ್ಲಿಕೆಯ ವಿಳಾಸ :
“ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ”, ಮೈಸೂರು ವೃತ್ತ, ಅರಣ್ಯ ಭವನ, ಅಶೋಕಪುರಂ, ಮೈಸೂರು – 570008
ಶಿವಮೊಗ್ಗ ಜಿಲ್ಲೆಯ ಅರ್ಜಿ ಸಲ್ಲಿಕೆಯ ವಿಳಾಸ :
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ, ಶಿವಮೊಗ್ಗ ವೃತ್ತ, ಶಿವಮೊಗ್ಗ.
ಹೊಳೆಹೊನ್ನೂರು ರಸ್ತೆ, ಸರ್ಕಾರಿ ಶ್ರೀಗಂಧ ಕೋಠಿ ಆವರಣ, ವಿದ್ಯಾನಗರ, ಶಿವಮೊಗ್ಗ – 577203
ಪ್ರಮುಖ ದಿನಾಂಕಗಳು : |
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 30 ಮಾರ್ಚ್ 2023 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 29 ಎಪ್ರಿಲ್ 2023 |
ಉದ್ಯೋಗ ಸ್ಥಳ : ಕರ್ನಾಟಕ |